Maretu Hoyite Nannaya Haajari - ಮರೆತು ಹೋಯಿತೇ ನನ್ನಯ ಹಾಜರಿ Kannada Keyboard Raaga Scale

ಮರೆತು ಹೋಯಿತೇ ನನ್ನಯ ಹಾಜರಿ 

ಸ್ವರಗಳು : A# B C D E F# G

ಹಾಡು ಶುರು ಆಗೋದು ತಾರ ಸ್ಥಾಯಿಯ B ನಿಂದ ಅಲ್ಲಿಂದ ಶುರುವಾಗಿ, ತಾರ ಸ್ತಾಯಿಯ ಸಾಮಾನ್ಯರು ತಲುಪಲು ಅತಿ ಕಷ್ಟವಾದ ಪಂಚಮ ಅಂದರೆ G note ತಲುಪುತ್ತಾರೆ ಸಂಜಿತ್.

ಇಲ್ಲಿ ನಮಗೆ ಮುಖ್ಯವಾಗಿ ಗಮನಿಸಬೇಕಾದ ಅಂಶ ತಂತ್ರಜ್ಞಾನ, ಏಕೆಂದರೆ ಒಬ್ಬ ಗಾಯಕ ತಾರ ಸ್ಥಾಯಿ ಮ ತಲುಪುವ ರೇಂಜ್ ಹೊಂದಿದ್ದರೆ ತಂತ್ರಜ್ಞಾನ ಬಳಸಿ ಅದನ್ನು ಇನ್ನೂ ಎತ್ತರದ ಸ್ವರಕ್ಕೆ ಬದಲಿಸಲು ಅವಕಾಶ ಇದೆ.
ಇರಲಿ.
ಮೊದಲ ಸಾಲಿನ ಸ್ವರಗಳು
ಮರೆತು ಹೋಯಿತೇ ನನ್ನಯ ಹಾಜರಿ

BGF#   EED         EED    EF#D ಮನಸುಗಳ ಇಲ್ಲಿಂದ   B ವರೆಗೂ ಬಂದು ತಲುಪುತ್ತದೆ .
ಬರೆದು  ಎದೆಯಲಿ ನೋವಿನ ಶಾಯರಿ

ಈ ಸಾಲಿಗೂ ಕೂಡ ಅದೇ ಸ್ವರಗಳು ಅನ್ವಯಿಸುತ್ತವೆ.

ಕರಗಿದೆ ನಾಲಿಗೆ , ಬರವಿದೆ. ಮಾ ತಿ ಗೆ 
A BC   DEB     ABCDC DEDEB

ಮೆರವಣಿಗೆ ಹೊರಟಂತೆ ನಾ ಸಾವಿಗೆ..
A#A#A#   BBBB      E  EF#EF#



ಈ ಸಾಲಿನಲ್ಲೇ ನನ್ ಪ್ರಕಾರ ಒಂದು ಅನ್ಯ ಸ್ವರ ಬರುತ್ತೆ . ಅದೇ A# ಈ ಸ್ವರ ಮೇಲೆ ತಿಳಿಸಿದಂತೆ ಎಲ್ಲ ಸಾಲಿನಲ್ಲಿ ಬರುವುದಿಲ್ಲ ಅಥವಾ ಹಾಡಿನ ಎಲ್ಲ ಕಡೆ ಕಾಣಿಸುವುದಿಲ್ಲ.



ಅಮರ್ ಚಿತ್ರದ ಹಾಡು E Minor ರಾಗ (ಪಾಶ್ಚಿಮಾತ್ಯ ಸಂಗೀತದಲ್ಲಿ ಹೇಳುವುದಾದರೆ), ಕರ್ನಾಟಕ ಸಂಗೀತದಲ್ಲಿ ಹೇಳುವುದಾದರೆ ಇದು ಮಿಶ್ರ ರಾಗದಲ್ಲಿ ಸಂಯೋಜಿತ ಹಾಡು ಎನಿಸುತ್ತದೆ. ಏಕೆಂದರೆ, ಇದರಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ರಾಗಕ್ಕೆ ಸಂಬಂಧಿಸದ ಒಂದು ನೋಟ್ ಅಥವಾ ಸ್ವರ ಬಳಕೆಯಾಗಿದೆ. ಅರ್ಜುನ್ ಜನ್ಯ ಅವರು ಅದ್ಭುತವಾಗಿ ಸಂಯೋಜಿಸಿದ್ದ್ದರೆ ಎಂದು ಹೇಳಬಹುದು. ಹಾಗೆ ನೋಡಿದರೆ, ಮಿಶ್ರ ರಾಗಗಳು ಚಿಟ್ರಾ ಸಂಗೀತದಲ್ಲಿ ಹೊಸದೇನು ಅಲ್ಲ, ರಾಜನ್ ನಾಗೇಂದ್ರ ಅವರಿಂದ ಇಂದಿನ ಯುವ ಸಂಗೀತ ನಿರ್ದೇಶಕರು ಅನೇಕರು, ಅನೇಕ ಹಾಡುಗಳಲ್ಲಿ ಮಿಶ್ರ ರಾಗ ಬಳಕೆ ಮಾಡಿದ್ದಾರೆ. 

ಈ ಹಾಡಿನ ಬಗ್ಗೆ ಮಾತನಾಡುವುದಾದರೆ ಇದು ನಟ ಭೈರವಿ ಮತ್ತು ಕೀರವಾಣಿ ರಾಗಗಳ ಮಿಶ್ರಣ ಎಂದು ನನ್ನ ಅನಿಸಿಕೆ, ನಾನು ಶಾಸ್ತ್ರೀಯವಾಗಿ ಸಂಗೀತ ಕಲಿಯದೇ ಇರುವುದು ನನ್ನ ಈ ದ್ವಂದ್ವ ಮಾಹಿತಿಗೆ ಕಾರಣ. ಆದರೆ ನೀವು ಈ ಮೈನರ್ ಎಂದು ಧೈರ್ಯವಾಗಿ ಹೇಳಬಹುದು, ಮತ್ತು ಹೊಸದಾಗಿ ಕಲಿಯುವವರು ಹಾಗೆ, ಕೇವಲ ನಮ್ಮ ಇಷ್ಟದ ಹಾಡು ನುಡಿಸುವಷ್ಟು ಕಲಿತರೆ ಸಾಕು ಎನ್ನುವವರಿಗೆ ಇದಕ್ಕಿಂತ ಹೆಚ್ಚು ಮಾಹಿತಿ ಸ್ವಲ್ಪ ಕಿರಿ ಕಿರಿ ತರಬಹುದು. 

ಮರೆತು ಹೋಯಿತೇ ಸಾಲು ಶುರುವಾಗುವುದೇ ತಾರ ಸ್ಥಾಯಿಯಲ್ಲಿ, ಸಂಜುಟ್ ಹೆಗಡೆ ಕೂಡ ಅದ್ಭುತ ಎನ್ನುವಂತೆ ಆ ಶ್ರುತಿಯಲ್ಲಿ ಹಾಡಿದ್ದಾರೆ. ನಾನು ಮೊದಲ ಸಲ ಕೇಳಿದಾಗ ಹೊಸ ದನಿ ಎನಿಸಿದರೂ, ಹಾಡಿನ ಎರಡನೇ ಸಾಲಿಗೆ ಖಡಾ ಖಂಡಿತವಾಗಿ ತಿಳಿಯಿತು ಇದು ಸಂಜಿತ್ ಹೆಗಡೆಯ ಮೃದು ದನಿ ಎಂದು. ಹಾಡಿನ ಮಾಧುರ್ಯವನ್ನು ತುಂಬಾ ಚನ್ನಾಗಿ ತಲುಪಿಸಿದ್ದಾರೆ. 

ಮಧ್ಯದಲ್ಲಿ ಅಂಬರೀಷ್ ಅವರ ಒಲವಿನ ಉಡುಗೊರೆ ಕೊಡಲೇನು ಹಾಡಂತೂ ಹೊಸ ಬೀಟ್ ನೊಂದಿಗೆ ಕೇಳುತ್ತಾ ಮೆಚ್ಚಿಕೊಳ್ಳದೆ ಇರಲು ಸಾಧ್ಯವೇ ಇಲ್ಲ. ಹಳೆಯ ಒರಿಜಿನಲ್ ಸಂಯೋಜಕರನ್ನು ಸ್ಮರಿಸಲೇಬೇಕು.  ಈಗಿನ ತಂತ್ರಜ್ಞಾನ ಬಳಸಿ ಅವರು ಸಂಯೋಜಿಸಿ ಇದ್ದಿದ್ದರೆ ಹೇಗಿರುತ್ತಿತ್ತೋ ಎಂದು ಅನಿಸದೇ ಇರದು. ಅದೇನೇ  ಇದ್ದರೂ, ಈ ಹಾಡನ್ನು ಕೇಳಿ ಮನಸೋಲದವರು ತುಂಬಾ ಕಡಿಮೆ. ಚಿತ್ರದ ಫಲಿತಾಂಶ ಸಂಗೀತದ ಮೇಲೆ ಕಡಿಮೆ ಪ್ರಭಾವ ಬೀರುತ್ತದೆ. ಆದರೆ, ಸಂಗೀತದ ಪ್ರಭಾವ ತುಂಬಾನೇ ಚಿತ್ರದ ಫಲಿತಾಂಶದ ಮೇಲೆ ಇರುತ್ತದೆ. ಅನೇಕ ಚಿತ್ರಗಳು ಕೇವಲ ಹಾಡುಗಳಿಂದಲೇ ಗೆದ್ದಿರುವ ಉದಾಹರಣೆಯು ತುಂಬಾ ಇದ್ದಾವೆ. 

ನಿವವು ಈ ಹಾಡನ್ನು ಕಲಿಯುವ ಮನಸಿದ್ದರೆ, ನನ್ನ ಮೇಲಿನ ವಿಡಿಯೋ ನೋಡಬಹುದು, ಬೇರೆ ಕನ್ನಡ ಹಾಡುಗಳು ಕಲಿಯಬೇಕಿದ್ದರೆ, ನನ್ನ ಯೂಟ್ಯೂಬ್ ಚಾನಲ್ ಭೇಟಿಮಾಡಿ , ಚಂದಾದರಾಗಬಹುದು. ಅಲ್ಲಿ ಅನೇಕ ಕನ್ನಡ ಹಾಡುಗಳನ್ನು ನುಡಿಸಿ ಪೋಸ್ಟ್ ಮಾಡಿದ್ದೇನೆ. ನಿಮಗೆ ಇಷ್ಟವಾಗುವ ಸಾಧ್ಯತೆಯೂ ಇಲ್ಲದಿಲ್ಲ..  :D

Comments