ಚಿತ್ರ: ಗಾಳಿಪಟ
ನಿರ್ದೇಶಕ: ಯೋಗರಾಜ್ ಭಟ್
ಸಂಗೀತ: ವಿ. ಹರಿಕೃಷ್ಣ
ತಾರಾಗಣ: ಅನಂತನಾಗ್,ಗಣೇಶ್, ರಾಜೇಶ್ ಕೃಷ್ಣನ್, ದಿಗಂತ್, ನೀತು, ಭಾವನ ರಾವ್ , ಡೈಸಿ ಬೋಪಣ್ಣ
ಒಂದು ಅದ್ಭುತ ಚಿತ್ರ ಎನ್ನುವುದು ನನ್ನ ಮೊದಲ ಅನಿಸಿಕೆ, ಇದಕ್ಕೆ ಅನೇಕ ಕಾರಣಗಳು, ಮುಂಗಾರು ಮಳೆಯ ಗುಂಗಿನಲ್ಲಿದ್ದವರಿಗೆ ಹಿಂಗಾರಿನ ಮಳೆಯಲ್ಲಿ, ಬಿಸಿ ಬಿಸಿ ಕಾಫಿಯ ಜೊತೆ ಗರಿ ಗರಿ ಸ್ನ್ಯಾಕ್ಸ್ ತಿನ್ನುತ್ತಾ ಮನೋರಂಜನೆ ಅನುಭವಿಸುವಂತೆ ಮಾಡಿದ್ದೂ, ಹಾಗೂ ಅನೇಕ ಓದುಗರು ತೇಜಸ್ವಿಯವರ ಶಿಕಾರಿ ಹೇಗಿದ್ದಿರಬಹುದೆಂದು ಕುತೂಹಲ ಇದ್ದವರಿಗೂ, ಒಳ್ಳೆಯ ದ್ರಿಶ್ಯಕಾವ್ಯ ನೀಡಿದರು ಭಟ್ಟರು.
ಛಳಿಗಾಲ ಮುಗಿದು ಬೇಸಿಗೆಯ ಬಿಸಿಲಿ ಕಾಲಿಡುವ ಮಧ್ಯದಲ್ಲಿ ರಿಲೀಸ್ ಆದ ಚಿತ್ರ, ಎಲ್ಲಾ ವಯಸ್ಸಿನ ಎಲ್ಲಾ ವಿಧದಲ್ಲಿಯೂ ಮನರಂಜಿಸಿದ ಚಿತ್ರ. ಹಾಸ್ಯ, ಪ್ರೀತಿ, ಭಾವನೆಗಳು, ಶಿಕಾರಿ, ಸಂಗೀತ, ರಮ್ಯಾ ರಮಣೀಯ ಸ್ಥಳಗಳು, ವರ್ಣರಂಜಿತ ಫ್ರೇಮ್ಗಳು. ಎಲ್ಲವೂ ಮೇಳೈಸಿದ ಅದ್ಭುತ ಚಿತ್ರ.
ನನಗಂತೂ , ನಮ್ಮ ಡಿಪ್ಲೋಮ ಮತ್ತು ಇಂಜಿನಿಯರಿಂಗ್ ನ ಕೆಲವು ಗೆಳೆಯರಿಗೆ ಇದರ ಎಲ್ಲಾ ಡೈಲಾಗ್ ಗಳೂ ಬಾಯಿಗೆ ಬರುತ್ತಿದ್ದವು, ಈಗಲೂ ಒಟ್ಟಿಗೆ ಕುಳಿತರೆ ಹೊಟ್ಟೆ ಹುಣ್ಣಾಗುವಷ್ಟು ನಕ್ಕು, ಚಿತ್ರವನ್ನು ಆಸ್ವಾದಿಸುತ್ತೇವೆ.
ಮಹಬೂಬ್ ಬಾಷಾ, ಪ್ರಮೋದ್ , ವಿನಯ್, ನವೀದ್, ಎಲ್ಲರು ಅದ್ಭುತವಾಗಿ ಆಸ್ವಾದಿಸಿದರು.
ಹಾಗೆ ನನ್ನ ಯೂಟ್ಯೂಬ್ ನೋಡುಗರು ಕೇಳಿದ್ದಕ್ಕಾಗಿ ಈ ಹಾಡನ್ನು ನುಡಿಸಲು ಪ್ರಯತ್ನ ಮಾಡಿದ್ದೇನೆ. ನಿಮಗೂ ಇಷ್ಟ ವಾಗಬಹುದು ಎಂದು ಭಾವಿಸಿದ್ದೇನೆ.
ಇನ್ನು ಇದರ ತಾಂತ್ರಿಕ ಅಂಶಗಳಲ್ಲಿ ಹೇಳುವುದಾದರೆ, ಈ ಹಾಡಿನ ಪ್ರೀಲ್ಯೂಡ್ (Prelude) (ಅಂದರೆ ಹಾಡಿಗೆ ಮೊದಲು ಬರುವ ಸಂಗೀತ) D Minorನಲ್ಲಿದ್ದು, ಹಾಡು ಮುಂದೆ ಸಾಗುತ್ತ ಅದರ ಶ್ರುತಿ ಬದಲಾವಣೆಯಾಗಿ ಒಂದೊಂದು ಶ್ರುತಿ ಹೆಚ್ಚುತ್ತಾ ಹೋಗುತ್ತದೆ ಮತ್ತು ಸಿ, ಡಿ ಹಾಗು ಈ ಮೈನರ್ ಮೂರು ಬಳಸಿದ್ದಾರೆ ಎಂದು ನನ್ನ ಅನಿಸಿಕೆ. ಇದು ತಪ್ಪಿದ್ದರೂ ಇರಬಹುದು, ಆದರೆ ಕೇಳಲು ಅಡ್ಡಿಯಿಲ್ಲ ಎನ್ನುವುದು ನನ್ನ ಭಾವನೆ.
ಕೆಳಗೆ ಹಾಡಿದೆ, ನೀವು ಅಭಿಪ್ರಾಯ ತಿಳಿಸಿ.

ವಿ.ಸೂ. : ಈ ಹಾಡು ಕೇವಲ ಪ್ರಮೋಷನಲ್ ಹಾಗೂ ಕಲಿಕೆಯ ದ್ರಿಷ್ಟಿಯಿಂದ ಮಾತ್ರ ಬಳಸಲಾಗಿದ್ದು, ಇದರಲ್ಲಿ ಯಾವುದೇ ಬೇರೆ ಸೃಜನಾತ್ಮಕ ಕಾರ್ಯಕ್ಕೆ ಬಳಸಲಾಗಿಲ್ಲ.
Comments
Post a Comment
Please Comment If you Like the Page..!